ಸೌತಾಂಪ್ಟನ್ ಪಿಚ್ ನಲ್ಲಿ ಭರ್ಜರಿ ತಿರುವು – ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ಇಷ್ಟು ರನ್ ಗಳಿಸಿದರೇ ಗೆಲುವು ಪಕ್ಕಾ ಎಂದದ್ದು ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸೌತಾಂಪ್ಟನ್ ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಮೊದಲ ದಿನದಾಟ ಮಳೆಗೆ ಆಹುತಿಯಾಗಿತ್ತು. ಎರಡನೇ ದಿನ ಮಂದಬೆಳಕಿನ ಅಡಚಣೆಯ ನಡುವೆಯೂ ಭಾರತ 146 ರನ್ ಗಳಿಸಿ ಕೇವಲ 3 ವಿಕೇಟ್ ಕಳೆದುಕೊಂಡಿತ್ತು. ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯಾ ರಹಾನೆ ಉತ್ತಮ ಲಯದಲ್ಲಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್ ಭಾರತ ಸದ್ಯ ಉತ್ತಮ ಲಯದಲ್ಲಿದೆ. ಭಾರತ 250 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದರೇ, ಖಂಡಿತ ನ್ಯೂಜಿಲೆಂಡ್ ಗೆ ಕಷ್ಟವಾಗಲಿದೆ ಎಂದು ಹೇಳಿದರು. ಸೌತಾಂಪ್ಟನ್ ನಲ್ಲಿ ಇಂದು ಬಿಸಿಲು ಬರಲಿದ್ದು ಪಿಚ್ ನ ತೇವಾಂಶ ಒಣಗಲಿದೆ. ಈ ಮೂಲಕ ಖಂಡಿತ ನಮ್ಮ ವೇಗಿಗಳು ಹಾಗೂ ಸ್ಪಿನ್ನರ್ ಗಳು ಖಂಡಿತವಾಗಿಯೂ ನ್ಯೂಜಿಲೆಂಡ್ ತಂಡದ ಮೇಲೆ ಒತ್ತಡ ಹಾಕುತ್ತಾರೆ ಎಂದು ಹೇಳಿದರು.

ಭಾರತೀಯ ಆರಂಭಿಕರಿಗೆ ಸಂಪೂರ್ಣ ಶ್ರೇಯಸ್ಸು ಕೊಟ್ಟ ವಿಕ್ರಂ ರಾಥೋರ್, ಬೌಲಿಂಗ್ ಗೆ ಸಹಕರಿಸುತ್ತಿದ್ದ ಪಿಚ್ ನಲ್ಲಿ ಉತ್ತಮ ಬ್ಯಾಟಿಂಗ್ ಮೂಲಕ ಮೊದಲ ಅವಧಿಯಲ್ಲಿ ಹೆಚ್ಚು ರನ್ ಗಳಿಸಿದರು. ಇನ್ನು ಪೂಜಾರ ಸಹ ಉತ್ತಮವಾಗಿ ಆಡಿದರು ಎಂದು ವಿಕ್ರಂ ಹೇಳಿದರು. ಒಟ್ಟಿನಲ್ಲಿ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 250 ಕ್ಕಿಂತ ಹೆಚ್ಚು ರನ್ ಗಳಿಸಿದರೇ ಖಂಡಿತ ಈ ಟೆಸ್ಟ್ ರೋಚಕವಾಗಿರಲಿದೆ. ಭಾರತ ತಂಡದ ಬ್ಯಾಟಿಂಗ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.