ಇನ್ಸ್ಟಾಗ್ರಾಂ ನಲ್ಲಿ ಅತಿಹೆಚ್ಚು ಫಾಲೋವರ್ಸ್ ಹೊಂದಿದ ಟಾಪ್-4 ಭಾರತೀಯರು ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಜನಪ್ರಿಯತೆ ಈಗ ಮೌಲ್ಯವಾಗುತ್ತಿರುವುದು ಸೋಶಿಯಲ್ ಮೀಡಿಯಾಗಳಲ್ಲಿ. ಮೊದಲೆಲ್ಲಾ ಸೆಲೆಬ್ರಿಟಿಗಳು ಯಾರಿಗೆ ಹೆಚ್ಚು ಅಭಿಮಾನಿಗಳಿದ್ದಾರೆ ಎಂಬುರದ ಮೇಲೆ ಚರ್ಚೆ ನಡೆಸುತ್ತಿದ್ದರೇ, ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಯಾರು ಅತಿ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ ಎಂಬುದರ ಮೇಲೆ ಸ್ಥಾನಗಳು ನಿರ್ಧಾರ ಆಗುತ್ತವೆ. ಸೋಶಿಯಲ್ ಮೀಡಿಯಾದ ದೈತ್ಯ ಇನ್ಸ್ಟಾಗ್ರಾಂ ನಲ್ಲಿ ಅತಿಹೆಚ್ಚು ಫಾಲೋವರ್ಸ್ ಹೊಂದಿರುವ ಟಾಪ್ -4 ಭಾರತೀಯರು ಈ ಕೆಳಗಿನಂತಿದ್ದಾರೆ.

ಟಾಪ್ 4 – ನೇಹಾ ಕಕ್ಕರ್ – ಬಾಲಿವುಡ್ ನ ಖ್ಯಾತ ಗಾಯಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರು ಇನ್ಸ್ಟಾಗ್ರಾಂನಲ್ಲಿ ಬರೋಬ್ಬರಿ 58.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಸದ್ಯ ಖ್ಯಾತ ಮ್ಯೂಸಿಕ್ ಶೋ ಇಂಡಿಯನ್ ಐಡಲ್ ನ ತೀರ್ಪುಗಾರರಲ್ಲಿ ಇವರು ಸಹ ಒಬ್ಬರು.

ಟಾಪ್ 3 : ಆಶಿಕಿ – 2 ಬೆಡಗಿ, ಖ್ಯಾತ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಮೂರನೇ ಸ್ಥಾನದಲ್ಲಿದ್ದಾರೆ. ಇವರಿಗೆ ಇನ್ಸ್ಟಾಗ್ರಾಂನಲ್ಲಿ ಬರೋಬ್ಬರಿ 62.8 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇವರು ಸದಾ ಇನ್ಸ್ಟಾಗ್ರಾಮ್ ನಲ್ಲಿ ಬಹಳ ಆಕ್ಟಿವ್ ಆಗಿ ಇರುತ್ತಾರೆ ಹಾಗೂ ಸದಾ ತಮ್ಮ ಕುರಿತು ಪ್ರತಿಯೊಂದು ಅಪ್ಡೇಟ್ ಗಳನ್ನೂ ಪೋಸ್ಟ್ ಮಾಡುತ್ತಿರುತ್ತಾರೆ.

ಟಾಪ್ 2 : ಪ್ರಿಯಾಂಕಾ ಚೋಪ್ರಾ – ಬಾಲಿವುಡ್ ಹಾಗೂ ಹಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಎರಡನೇ ಸ್ಥಾನದಲ್ಲಿದ್ದಾರೆ. ಇವರನ್ನ ಇನ್ಸ್ಟಾ ಗ್ರಾಂ ನಲ್ಲಿ 64.4 ಮಿಲಿಯನ್ ಜನ ಫಾಲೋ ಮಾಡುತ್ತಿದ್ದಾರೆ. ಹಾಲಿವುಡ್ ನಟ ನಿಕ್ ಜೋನಾಸ್ ರನ್ನ ಮದುವೆಯಾಗಿರುವ ಪ್ರಿಯಾಂಕಾ ಆಗಾಗ ದಂಪತಿಗಳಿಬ್ಬರ ಫೋಟೋವನ್ನ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಟಾಪ್ 1: ವಿರಾಟ್ ಕೊಹ್ಲಿ – ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲನೇ ಸ್ಥಾನದಲ್ಲಿ ಇದ್ದಾರೆ. ಇವರು ಇನ್ಸ್ಟಾಗ್ರಾಂ ಇತಿಹಾಸದಲ್ಲಿಯೇ ದಾಖಲೆ ಎಂಬಂತೆ 127 ಮಿಲಿಯನ್ ಫಾಲೋವರ್ಸ್ ರನ್ನು ಹೊಂದಿದ್ದಾರೆ. ಟಾಪ್ 2 ಪ್ರಿಯಾಂಕರ ಫಾಲೋವರ್ಸ್ ರ ಡಬಲ್ ಸಂಖ್ಯೆಯ ಫಾಲೋವರ್ಸ್ ಹೊಂದಿರುವುದು ವಿರಾಟ್ ವಿಶೇಷ. ಸದ್ಯ ಪತ್ನಿ ಅನುಷ್ಕಾ ಹಾಗೂ ಮಗಳು ವಮಿಕಾ ಜೊತೆ ಇರುವ ಫೋಟೋವನ್ನ ಇಡಿ ಇನ್ಸ್ಟಾ ಜಗತ್ತು ಕೊಹ್ಲಿ ಖಾತೆಯಲ್ಲಿ ಎದುರು ನೋಡುತ್ತಿದೆ. ಈ ಟಾಪ್ 4 ಸೆಲೆಬ್ರಿಟಿಗಳಲ್ಲಿ, ನೀವು ನಿಮ್ಮ ಇನ್ಸ್ಟಾ ಖಾತೆಯಲ್ಲಿ ಯಾರನ್ನು ಫಾಲೋ ಮಾಡುತ್ತಿದ್ದಿರೆಂದು ನಮಗೆ ಕಮೆಂಟ್ ಮೂಲಕ ತಿಳಿಸಿ.