ಮಾಸ್ಟರ್ ಮಂಜುನಾಥ್ ಗೆ ಅವಕಾಶಗಳ ಮೇಲೆ ಅವಕಾಶಗಳು ಸಿಕ್ಕರೂ ಚಿತ್ರರಂಗ ತೊರೆದಿದ್ದು ಏಕೆ ಗೊತ್ತಾ ?? ವಿಷಯ ಬೇರೆಯೇ ಇದೇ.

ನಮಸ್ಕಾರ ಸ್ನೇಹಿತರೆ, ಕನ್ನಡದ ಬಾಲ ನಟರಲ್ಲಿ ಪ್ರಧಾನ ಸ್ಥಾನ ಪಡೆದ ಪೈಕಿ ನಟ ಮಾಸ್ಟರ್ ಮಂಜುನಾಥ್ ಅತ್ಯಂತ ಪ್ರಮುಖರು. ಕನ್ನಡವು ಸುಮಾರು 70 ದಶಕಗಳಿಂದಲೂ ಅನೇಕ ಬಾಲ ನಟರನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟಿದೆ. ಅವರಲ್ಲಿ ಮಾಸ್ಟರ್ ಮಂಜುನಾಥ್ ಅವರ ಸಾಧನೆ ಬಹಳ ಪ್ರಮುಖವಾದದ್ದು. ತನ್ನ ಮೂರನೇ ವಯಸ್ಸಿನಲ್ಲಿ ನಟಿಸಲು ಪ್ರಾರಂಭಿಸಿದ ಇವರು ಕನ್ನಡ ತೆಲುಗು ಮತ್ತು ಹಿಂದಿ ಭಾಷೆ ಸೇರಿದಂತೆ ಸುಮಾರು 68 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಮಾಸ್ಟರ್ ಮಂಜುನಾಥ್ ಎಂದ ತಕ್ಷಣ ಅವರ ನಟನೆಯ ಹಲವಾರು ಚಿತ್ರಗಳು ನಮ್ಮ ಕಣ್ಣ ಮುಂದೆ ಬಂದು ಹೋಗುತ್ತವೆ. ಆದರೆ ಅವುಗಳೆಲ್ಲಾ ನಟ ಶಂಕರ್ ನಾಗ್ ಹಾಗೂ ಮಾಸ್ಟರ್ ಮಂಜುನಾಥ್ ಅವರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿದ್ದ ಚಿತ್ರಗಳು ಬಹಳ ಅಚ್ಚುಮೆಚ್ಚು. ಮಂಜುನಾಥ್ ಅವರಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದೆ ಶಂಕರನಾಗ್ ಅವರಿಂದ. ಆ ಬಳಿಕ ರಾಜ್ಯದ ಮನೆಮಾತಾದ ಈ ಜೋಡಿ ಮುಂದೆ ಅಂಬರೀಶ್ ಆಗು ರವಿಚಂದ್ರನ್ ಸೇರಿದಂತೆ ಹಲವಾರು ದಿಗ್ಗಜರೊಂದಿಗೆ ನಟನೆಯನ್ನು ಮಾಡಿದರು.

ಯಶಸ್ವಿ ಬಹುಭಾಷಾ ನಟರಾದ ಮಾಸ್ಟರ್ ಮಂಜುನಾಥ್ ಅವರು ಮೂಲತಃ ಬೆಂಗಳೂರಿನವರು. ಶಂಕರನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ನಲ್ಲಿ ಇವರ ಪಾತ್ರ ಬಹಳ ಅಧಿಕ ಮಾನ್ಯತೆ ಪಡೆಯಿತು. ಜೊತೆಗೆ ರಾಜ್ಯ ರಾಷ್ಟ್ರ ಸೇರಿದಂತೆ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಸಹ ಪಡೆದುಕೊಂಡರು. ತನ್ನ 17ನೇ ವಯಸ್ಸಿಗೆ ನಟನೆಗೆ ನಮನ ಸಲ್ಲಿಸಿದ ಮಾಸ್ಟರ್ ಮಂಜುನಾಥ್ ಅವರು ಶಿಕ್ಷಣ ಹೊಂದುವ ಕಡೆಗೆ ಆಸಕ್ತರಾದರು. ಬೆಂಗಳೂರು ವಿವಿಯಲ್ಲಿ ಆಂಗ್ಲ ಸಾಹಿತ್ಯದಲ್ಲಿ ತಮ್ಮ ಪದವಿಯನ್ನು ಪೂರೈಸಿ ಬಳಿಕ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಳ್ಳುತ್ತಾರೆ.

ಮಂಜು ಅವರಿಗೆ ಸ್ವರ್ಣರೇಖಾ ಎನ್ನುವ ಪತ್ನಿ ಇದ್ದಾರೆ. ಇವರಿಗೆ 45ನೇ ವರ್ಷದ ವಸಂತ ದಲ್ಲಿರುವ ಮಾಸ್ಟರ್ ಮಂಜುನಾಥ್ ಬೆಂಗಳೂರು ಹಾಗೂ ಮೈಸೂರು ಕಾರಿಡಾರ್ ಪ್ರಾಜೆಕ್ಟ್ನಲ್ಲಿ ಇದ್ದು ಇದೀಗ ತಮ್ಮದೇ ಆದ ಒಂದು ಸ್ವಂತ ಕಂಪನಿಯೊಂದನ್ನು ಹೊಂದಿದ್ದಾರೆ. ಸದ್ಯಕ್ಕೆ ಈಗ ನಿಮ್ಮದಿ ಜೀವನದಲ್ಲಿ ಇರುವ ಇವರು ಸಿನಿಮಾರಂಗಕ್ಕೆ ಬರುತ್ತಾರೋ ಇಲ್ಲವೋ ಕಾದು ನೋಡಬೇಕಾಗಿದೆ.