ಒಂದೇ ಒಂದು ಡೆಲಿವರಿ ಜೋಮ್ಯಾಟೋ ಹುಡುಗನ ಅದೃಷ್ಠ ಬದಲಾಯಿಸಿದ್ದು ಹೇಗೆ ಗೊತ್ತಾ?? ಅಷ್ಟಕ್ಕೂ ಅಲ್ಲಿ ನಡೆದ್ದದ್ದೆನು??

ನಮಸ್ಕಾರ ಸ್ನೇಹಿತರೇ ಜೀವನದಲ್ಲಿ ಎಂಹದೇ ಕಷ್ಟ ಬಂದರೂ ದೇವರಿದ್ದಾನೆ ಎಂಬುದು ಆಗಾಗ ಸಂಭವಿಸುವ ಘಟನೆಗಳಿಂದ ರುಜುವಾತಾಗುತ್ತದೆ. ಇದು ಹೈದರಾಬಾದ್ ನಲ್ಲಿ ನಡೆದ ಸತ್ಯ ಘಟನೆ. ಜೋಮ್ಯಾಟೋ ಡೆಲಿವರಿ ಬಾಯ್ ಒಬ್ಬನಿಗೆ ಹೊಡೆದ ಅದೃಷ್ಠದ ಲಾಟರಿ ಎನ್ಪಬಹುದು.

ರಾತ್ರಿ ಹತ್ತು ಘಂಟೆಗೆ ಜೋರಾಗಿ ಮಳೆ ಬರುತ್ತಿತ್ತು. ವರ್ಕ್ ಫ್ರಂ ಹೋಮ್ ಮಾಡುತ್ತಿದ್ದ ಐಟಿ ಉದ್ಯೋಗಿ ರಾಬಿನ್ ಮುಕೇಶ್ ಗೆ ಬಿಸಿ ಬಿಸಿ ಟೀ ಕುಡಿಯಬೇಕೆನಿಸಿತು. ತಕ್ಷಣವೇ ತಮ್ಮ ಜೋಮ್ಯಾಟೋ ಆಪ್ ನಿಂದ ಹೈದರಾಬಾದ್ ನ ಲಕ್ಡಿ ಕಾ ಪೂಲ್ ಹೋಟೆಲ್ ನಿಂದ ಆರ್ಡರ್ ಮಾಡಿದರು. ಟೀ ಆರ್ಡರ್ ಮಾಡಿದಾಗಿನಿಂದ ಅವರ ಅಪಾರ್ಟ್ ಮೆಂಟ್ ಗೆ ಬರುವ ತನಕ ಟ್ರಾಕ್ ಮಾಡಿದ್ದರು.

ಮೊಹಮದ್ ಅಕಿಲ್ ಎಂಬಾತ ತನ್ನ ಡೆಲಿವರಿ ತೆಗೆದುಕೊಂಡು ಬರುತ್ತಿದ್ದಾನೆ ಎನ್ನುವುದು ತಿಳಿಯಿತು. 15 ನಿಮಿಷದೊಳಗೆ ರಾಬಿನ್ ಇರುವ ಅಪಾರ್ಟ್ ಮೆಂಟ್ ಗೆ ಬಂದು ಡೆಲಿವರಿಯನ್ನು ತೆಗೆದುಕೊಳ್ಳಲು ಕೆಳಗೆ ಬನ್ನಿ ಎಂದು ರಾಬಿನ್ ಗೆ ಅಕೀಲ್ ಕರೆ ಮಾಡಿದ್ದಾನೆ. ಹೊರಗೆ ಬಂದ ರಾಬಿನ್ ಗೆ ಮನ ಕರಗಿ ಹೋಯಿತು. ಧೋ ಎಂದು ಸುರಿಯುವ ಮಳೆಯಲ್ಲಿಯೇ ಅಷ್ಟು ದೂರದಿಂದ ಸೈಕಲ್ ಹೊಡೆದುಕೊಂಡು ಆರ್ಡರ್ ಡೆಲಿವರಿ ಮಾಡಿದ್ದ.

ಮುಂದೆ ಮೊಹಮದ್ ಅಕಿಲ್ ಬಗ್ಗೆ ಹೆಚ್ಚು ವಿಚಾರಿಸಿದಾಗ, ಆತ ಬಿ ಟೆಕ್ ಪದವೀಧರನಾಗಿದ್ದು, ಕಳೆದೊಂದು ವರ್ಷದಿಂದ ಸೈಕಲ್ ನಲ್ಲೇ ಫುಡ್ ಡೆಲಿವರಿ ಮಾಡುವ ಕೆಲಸ ಮಾಡುತ್ತಿರುವುದು ತಿಳಿಯಿತು. ಏನಾದರೂ ಸಹಾಯ ಬೇಕೆಂದು ಕೇಳಿದಾಗ, ತನಗೊಂದು ಬೈಕ್ ಇದ್ದರೇ ಸಾಕು ಎಂದು ಅಕಿಲ್ ಹೇಳಿದ.

ಕೂಡಲೇ ಕಾರ್ಯೋನ್ಮುಖವಾದ ರಾಬಿನ್, ಮೊಹಮದ್ ಅಕಿಲ್ ಕತೆಯನ್ನ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿ ಕ್ರೌಡ್ ಫಂಡಿಂಗ್ ಮಾಡಲು ಶುರು ಮಾಡಿದ. ನೋಡ ನೋಡುತ್ತಿದಂತೆಯೇ 73 ಸಾವಿರದಷ್ಟು ಹಣ ಸಂಗ್ರಹವಾಯಿತು. ನಂತರ ಅದೇ ದುಡ್ಡಿನಲ್ಲಿ ಐಟಿ ಉದ್ಯೋಗಿ ರಾಬಿನ್ ಮುಕೇಶ್ ಡೆಲಿವರಿ ಬಾಯ್ ಮೊಹಮದ್ ಅಕಿಲ್ ರವರಿಗೆ ಹೊಸ ಬೈಕೊಂದನ್ನು ಗಿಫ್ಟ್ ಮಾಡಿದ್ದಾರೆ. ಬೈಕ್ ಪಡೆದುಕೊಂಡ ಅಕಿಲ್ ಸಂತಸಕ್ಕೆ ಪಾರವೇ ಇರಲಿಲ್ಲ.

ಕೆಲಸದಲ್ಲಿ ಕಠಿಣ ಪರಿಶ್ರಮ ಎಂದಾದರೂ ಒಂದು ದಿನ ಫಲ ಕೊಡುತ್ತದೆ ಎಂಬುದಕ್ಕೆ ಮೊಹಮದ್ ಅಕಿಲ್ ರವರ ಈ ಪ್ರಕರಣವೇ ಸಾಕ್ಷಿ. ಇಂತಹ ಕಾಲದಲ್ಲಿಯೂ ರಾಬಿನ್ ಮುಕೇಶ್ ರಂತಹ ಸಹಾಯ ಮಾಡುವ ಮನಸ್ಸುಗಳಿದೆಯಲ್ಲಾ, ಅದೇ ದೊಡ್ಡದು. ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ‌.