ಆರ್ಸಿಬಿ ತಂಡದಿಂದ ಬೇರೆ ತಂಡಕ್ಕೆ ಹೋಗಿ ಮ್ಯಾಚ್ ವಿನ್ನಿಂಗ್ ಆಟ ಆಡಿದ ಟಾಪ್ -4 ಆಟಗಾರರು ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನೀವು ಒಂದು ವೇಳೆ ಆರ್ಸಿಬಿ ತಂಡದ ಅಭಿಯಾನಿಯಾಗಿದ್ದರೇ, ಈ ಒಂದು ಮಾತನ್ನ ಖಂಡಿತ ಹೇಳಿರುತ್ತಿರಿ. ನಮ್ಮ ಆರ್ಸಿಬಿ ತಂಡಕ್ಕೆ ಲಕ್ ಅನ್ನೋದು ಸ್ವಲ್ಪ ಸಹ ಇಲ್ಲ ಎಂದು. ಅದು ಕೆಲವು ಸಲ ನಿಜ. ಆರ್ಸಿಬಿ ಪ್ರತಿ ಭಾರಿ ಹರಾಜಿನಲ್ಲಿ ಉತ್ತಮ ಆಟಗಾರರನ್ನ ಖರೀದಿಸಿದರೂ, ಅವರ ಫಲಿತಾಂಶ ನೀರಿಕ್ಷೆಗೆ ತಕ್ಕನಾಗಿ ಇರುವುದಿಲ್ಲ. ಆದರೇ ಅವರು ಬೇರೆ ತಂಡಕ್ಕೆ ಹೋದಾಗ ಮಾತ್ರ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಾರೆ. ಆ ಆಟಗಾರರನ್ನ ಸರಿಯಾಗಿ ಆರ್ಸಿಬಿ ಮ್ಯಾನೇಜ್ ಮೆಂಟ್ ಬಳಸಿಕೊಳ್ಳುತ್ತಿಲ್ಲ ಎಂಬ ಆಪಾದನೆ ಸಹ ಇದೆ. ಆರ್ಸಿಬಿಯಿಂದ ಬೇರೆ ತಂಡಕ್ಕೆ ಹೋಗಿ ಉತ್ತಮ ಪ್ರದರ್ಶನ ನೀಡಿದ ಟಾಪ್ -4 ಆಟಗಾರರ ಪಟ್ಟಿ ಈ ಕೆಳಗಿನಂತಿದೆ.

ಟಾಪ್ ನಾಲ್ಕನೇ ಸ್ಥಾನದಲ್ಲಿ ಕ್ವಿಂಟನ್ ಡಿ ಕಾಕ್ – ಸದ್ಯ ಮುಂಬೈ ತಂಡದಲ್ಲಿರುವ ಕ್ವಿಂಟನ್ ಆರ್ಸಿಬಿ ತಂಡದಲ್ಲಿ 2018 ರಲ್ಲಿ ಇದ್ದರು. ಆದರೇ ಆರ್ಸಿಬಿ ಇವರಿಗೆ ಹೆಚ್ಚು ಅವಕಾಶ ನೀಡದೇ ಪಾರ್ಥಿವ್ ಪಟೇಲ್ ರನ್ನ ಬಳಸಿಕೊಂಡಿತು. ಮುಂದೆ ಮುಂಬೈ ತಂಡಕ್ಕೆ ಹೋದ ಡಿ ಕಾಕ್ ಅಲ್ಲಿ ಈಗ ಖಾಯಂ ಆಟಗಾರರಾಗಿದ್ದಾರೆ.

ಟಾಪ್ ಮೂರನೇ ಸ್ಥಾನದಲ್ಲಿ ನಾಥನ್ ಕೌಲ್ಟರ್ ಲೈನ್ – ಆಸ್ಟ್ರೇಲಿಯಾದ ವೇಗಿಯನ್ನ ಖರಿದೀಸಿದ್ದ ಆರ್ಸಿಬಿ , ಈ ವೇಗಿಗೆ ಅವಕಾಶ ನೀಡಿದ್ದಕ್ಕಿಂತ ಬೆಂಚು ಕಾಯಿಸುವ ಹಾಗೆ ಮಾಡಿತು. ಮುಂದೆ ನಾಥನ್ ಕೋಲ್ಕತ್ತಾ ತಂಡಕ್ಕೆ ಸೇರಿದಾಗ, ಆರ್ಸಿಬಿ 49 ರನ್ ಗೆ ಆಲೌಟ್ ಆದಾಗ ಇವರೇ ಪ್ರಮುಖ ವಿಕೇಟ್ ಟೇಕರ್ ಆಗಿದ್ದರು‌.

ಟಾಪ್ ಎರಡನೇ ಸ್ಥಾನದಲ್ಲಿ ಶೇನ್ ವ್ಯಾಟ್ಸನ್ – ಆಸ್ಟ್ರೇಲಿಯಾದ ಆಲ್ ರೌಂಡರ್ 2016ರಲ್ಲಿ ಆರ್ಸಿಬಿ ತಂಡದಲ್ಲಿ ಇದ್ದರು. ಬೌಲಿಂಗ್ ನಲ್ಲಿ ಮಿಂಚಿ 20 ವಿಕೇಟ್ ತೆಗೆದಿದ್ದರೂ, ಬ್ಯಾಟಿಂಗ್ ನಲ್ಲಿ ಕೊಡುಗೆ ನೀಡಲಿಲ್ಲ. ಅದಕ್ಕೆ ಕಾರಣ ಆರ್ಸಿಬಿ ಆಡಳಿತ ಮಂಡಳಿ ವ್ಯಾಟ್ಸನ್ ರನ್ನ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಕಳಿಸುತ್ತಿತ್ತು. ವ್ಯಾಟ್ಸನ್ ಬೇರೆ ತಂಡಗಳಿಗೆ ಆಡಿದಾಗ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರ ಬ್ಯಾಟಿಂಗ್ ಕ್ರಮಾಂಕ ಬದಲಾಗಿದ್ದೇ ಅವರ ವೈಫಲ್ಯಕ್ಕೆ ಕಾರಣ ಎಂದು ಹೇಳಲಾಗಿತ್ತು.

ಟಾಪ್ ಮೊದಲನೇ ಸ್ಥಾನದಲ್ಲಿ ಕೆ.ಎಲ್.ರಾಹುಲ್ – ಕನ್ನಡಿಗ ರಾಹುಲ್ 2016 ರಲ್ಲಿ ಆರ್ಸಿಬಿ ತಂಡದಲ್ಲಿದ್ದರು. 318 ರನ್ ಗಳಿಸಿದ್ದರೂ ಅವರನ್ನ ತಂಡದಿಂದ ಕೈ ಬಿಟ್ಟಿತು. ನಂತರ ಪಂಜಾಬ್ ತಂಡಕ್ಕೆ ಹೋದ ರಾಹುಲ್ ಅಲ್ಲಿ ನಾಯಕರಾಗಿಯೂ ಹಾಗೂ ಅತ್ಯಧಿಕ ರನ್ ಗಳಿಸಿ ಆರೇಂಜ್ ಕ್ಯಾಪ್ ಪಡೆದುಕೊಂಡರು. ಆರ್ಸಿಬಿ ತಂಡದಿಂದ ಬೇರೆ ತಂಡಕ್ಕೆ ಹೋಗಿ ಉತ್ತಮ ಪ್ರದರ್ಶನ ನೀಡುತ್ತಿರುವ ನಿಮಗೆ ಗೊತ್ತಿರುವ ಆಟಗಾರರನ್ನ ಕಮೆಂಟ್ ಮೂಲಕ ತಿಳಿಸಿ.