ಕೊನೆಗೂ ಬಯಲಾಯಿತು ಸಾಯಿ ಪಲ್ಲವಿ ಮಾತೃಭಾಷೆ, ಇತ್ತೀಚಿನ ಸ್ಟೇಟಸ್ ಒಂದರಲ್ಲಿ ಆಕೆ ಮದುವೆ ಸ್ಕ್ವಾಡ್ ಎಂಬ ಪದ ಬಳಸಿದ್ದಕ್ಕೆ ಗೊತ್ತಾ ??

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಸಿನಿಮಾ ಹೀರೋಯಿನ್ಗಳೆಂದರೆ ಅಲ್ಲಿ ಹೆಚ್ಚು ಗ್ಲಾಮರ್ ಎಕ್ಸ್ಪೋಸೆಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ ಎಂಬುದು ಹಲವರ ಅಭಿಪ್ರಾಯ. ಆದರೆ ಹಳೆ ಸಿನಿಮಾಗಳಲ್ಲಿ ಇವೆಲ್ಲ ಇರಲಿಲ್ಲ ಬದಲಿಗೆ ಆಕ್ಟಿಂಗ್ ಹೆಚ್ಚು ಪ್ರಾಮುಖ್ಯತೆ ಹಾಗೂ ಒತ್ತು ನೀಡಲಾಗುತ್ತಿತ್ತು. ಆದರೆ ಈಗಂತೂ ನಟಿಯರು ಧರಿಸುವಂತಹ ತುಂಡು ಬಟ್ಟೆ, ಬೋಲ್ಡ್ನೆಸ್ ಹಾಗೂ ಕಡಕ್ ಆಕ್ಟಿಂಗ್ಗೆ ಹೆಚ್ಚಿನ ಪ್ರಾಮುಖ್ಯತೆ ಇದೆ ಎಂಬ ಆರೋಪ ಎಲ್ಲೆಡೆ ಕೇಳಿಬರುತ್ತಿದೆ.

ಆದರೆ ಅಲ್ಲೋ ಇಲ್ಲೋ ಎಂಬಂತೆ ಕೆಲವು ನಟಿಯರು ಮಾತ್ರ ಮೈತುಂಬಾ ಬಟ್ಟೆ ಧರಿಸಿ ಯಾವುದೇ ರೀತಿಯಾದಂತಹ ಎಕ್ಸ್ ಪೋಸ್ಗೆ ಅವಕಾಶ ನೀಡದೆ ಹೆಚ್ಚು ಮೇಕಪ್ ಕೂಡ ಮಾಡಿಕೊಳ್ಳದೆ ಸಿನಿಮಾಗಳಲ್ಲಿ ನಟಿಸುವ ಮೂಲಕ ಹೆಚ್ಚಿನ ಅಭಿಮಾನಿಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಹ ನಟಿಯರ ಸ್ಥಾನದಲ್ಲಿ ಮೊದಲು ನಿಲ್ಲುವ ನಟಿಯೆಂದರೆ ಮುದ್ದು ಮುಖದ ಹುಡುಗಿ ಸಾಯಿಪಲ್ಲವಿ.

ಈ ಚೆಲುವೆಯ ಆಕ್ಟಿಂಗ್ಗಿಂತ ಡ್ಯಾನ್ಸಿಂಗ್ ಬಗ್ಗೆ ಅದೆಷ್ಟೋ ಮಂದಿ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲದೆ ಪ್ರೇಕ್ಷಕರು ಸಾಯಿ ಪಲ್ಲವಿ ಡ್ಯಾನ್ಸ್ ನೋಡುವ ಕಾರಣಕ್ಕಾಗಿಯೇ ಸಿನಿಮಾಗೆ ಹೋಗುತ್ತಾರೆ. ಇತ್ತೀಚಿಗಂತೂ ಮಾರಿ ಟು ಚಿತ್ರದ ರೌಡಿ ಬೇಬಿ ಸಾಂಗ್ ಎಲ್ಲೆಡೆ ಸಖತ್ ವೈರಲ್ ಆಗಿ ಕೋಟ್ಯಂತರ ಲೈಕ್ಸ್ ಪಡೆದುಕೊಂಡಿತ್ತು. ಮಾರಿ ಟು ಚಿತ್ರದ ರೌಡಿ ಬೇಬಿ ಹಾಗೂ ಫಿದಾ ಚಿತ್ರದ ಪಿಲ್ಲ ಮೆಲ್ಲಗ ವಚ್ಚಿಂದೆ ತರಹ ಲವ್ ಸ್ಟೋರಿ ಚಿತ್ರಗಳ ಸಾರಂಗಧರ ಹಾಡುಗಳಲ್ಲಿ ಸಾಯಿ ಪಲ್ಲವಿ ಡ್ಯಾನ್ಸ್ ನೋಡುತ್ತಿದ್ದರೆ ನಮ್ಮನೋಟ ಸಾಮಾನ್ಯವಾಗಿ ಬೇರೆಲ್ಲೋ ಹೋಗಲು ಸಾಧ್ಯವೇ ಇಲ್ಲ.

ಯುವಕರಿಗಂತೂ ಸಾಯಿ ಪಲ್ಲವಿ ಎಂಬ ಪಿಂಪಲ್ ಬ್ಯೂಟಿ ಹಾಟ್ ಫೇವರಿಟ್. ಇತ್ತೀಚಿಗಷ್ಟೇ ನಟಿ ಸಾಯಿ ಪಲ್ಲವಿ ತಮ್ಮ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಂಡಿದ್ದು ಆಕೆ ತನ್ನ ಸ್ಟೇಟಸ್ನಲ್ಲಿ ಬಳಸಿರುವಂತಹ ಪದ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ.

ಹೌದು ತಮ್ಮ ಕುಟುಂಬದೊಂದಿಗೆ ಇದ್ದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಸಾಯಿಪಲ್ಲವಿ ಪೋಸ್ಟ್ ಒಂದರಲ್ಲಿ ಫೋಟೋ ಒಂದಿಗೆ ಮದುವೆ ಸ್ಕ್ವಾಡ್ ಎಂಬ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಇದು ಪದ ಕನ್ನಡದ ಅಲ್ಲವೇ ಸಾಯಿ ಪಲ್ಲವಿ ಯಾಕೆ ಕನ್ನಡದಲ್ಲಿ ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಅವರ ಮಾತೃಭಾಷೆ ಯಾವುದು ಎಂಬ ಚರ್ಚೆ ಜೋರಾಗಿಯೇ ನಡೆಯುತ್ತಿದೆ.