ಶುಭಮಾನ್ ಗಿಲ್ ಗಾಗಿ ಕನ್ನಡಿಗ ಮಯಾಂಕ್ ಅಗರವಾಲ್ ಮಾಡಿದ ತ್ಯಾಗ ಎಂತಹದು ಗೊತ್ತೇ?? ಶುಭಮ್ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲಾ ತಿಳಿದಿರುವಂತೆ ಕೆಲವೊಮ್ಮೆ ನಾವು ಮಾಡುವ ತ್ಯಾಗಗಳೇ ನಮ್ಮ ಜೀವನಕ್ಕೆ ಮುಳುವಾಗಿಬಿಡುತ್ತವೆ ಎಂಬುದು. ಮಹಾಭಾರತದಿಂದ ಹಿಡಿದೂ ಇಂದಿನ ಭಾರತದ ತನಕವೂ ತ್ಯಾಗಕ್ಕೆ ಬೆಲೆ ಹೆಚ್ಚು. ಪ್ರೀತಿ ಮಧುರ, ತ್ಯಾಗ ಅಮರ ಅಂತ ಹಾಡು ಸಹ ಕೇಳಿರಬಹುದು. ಟೀಂ ಇಂಡಿಯಾದಲ್ಲಿ ಅಂತಹದ್ದೇ ಒಂದು ತ್ಯಾಗದ ಕತೆ ಈಗ ಬಹಿರಂಗಗೊಂಡಿದೆ. ಯಾವುದು ಅದು ಎಂದು ತಿಳಿಯೋಣ ಬನ್ನಿ.

ಕಳೆದ ವರ್ಷದ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಮೊದಲ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ 36 ರನ್ನುಗಳಿಗೆ ಆಲೌಟ್ ಆಗಿತ್ತು. ಮುಂದಿನ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಕೆಲವು ಬದಲಾವಣೆಯೊಂದಿಗೆ ಹೊಸ ತಂಡ ಕಣಕ್ಕಿಳಿಯಿತು. ಟೀಂ ಇಂಡಿಯಾ ಪರ ಶುಭಮಾನ್ ಗಿಲ್ ಹಾಗೂ ಮಯಾಂಕ್ ಅಗರವಾಲ್ ಆರಂಭಿಕರಾಗಿ ಕಣಕ್ಕಿಳಿದರು.

ಅಂದು ಗಿಲ್ ಮೊದಲ ಎಸೆತವನ್ನು ಎದುರಿಸಬೇಕಿತ್ತಂತೆ. ಆದರೇ ಕ್ರೀಡಾ ಸ್ಪೂರ್ತಿ ಮೆರೆದ ಮಯಾಂಕ್, ನೀನು ಮೊದಲ ಟೆಸ್ಟ್ ಆಡುತ್ತಿರುವೆ, ನಿನ್ನ ಬದಲು ನಾನು ಸ್ಟ್ರೈಕ್ ತೆಗೆದುಕೊಳ್ಳುತ್ತೆನೆ , ಆಲ್ ದ ಬೆಸ್ಟ್ ಚಾಂಪ್ ಎಂದು ಸ್ಟ್ರೈಕ್ ತೆಗೆದುಕೊಂಡರಂತೆ. ಆದರೇ ಚೆಂಡು ಹೊಸದಾಗಿದ್ದ , ಮೊದಲ ಓವರ್ ನಲ್ಲೇ ಮಯಾಂಕ್ ಎಲ್ ಬಿ ಬಲೆಗೆ ಬಿದ್ದರು. ಅಂಪೈರ್ ಕಾಲ್ ಆಗಿದ್ದರಿಂದ ಔಟ್ ಆಗಿ ಹೊರನಡೆದರು. ಆದರೇ ನಂತರ ಬಂದ ಪೂಜಾರ ಎರಡು ಒವರ್ ಅವರೇ ಆಡಿದ ನಂತರ ಗಿಲ್ ಟೆಸ್ಟ್ ಕ್ರಿಕೇಟ್ ನಲ್ಲಿ ಮೊದಲ ಎಸೆತ ಎದುರಿಸಿ ಅರ್ಧ ಶತಕ ಭಾರಿಸಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡರು.

ನಂತರದ ಟೆಸ್ಟ್ ಪಂದ್ಯಗಳಲ್ಲಿ ಮಯಾಂಕ್ ತಂಡದಿಂದ ಹೊರ ಬಿದ್ದರು. ಇಂಗ್ಲೆಂಡ್ ವಿರುದ್ದದ ಸರಣಿಯಲ್ಲಿಯೂ ಸಹ ಅವಕಾಶ ಸಿಗಲಿಲ್ಲ. ಈಗ ಈ ಬಗ್ಗೆ ಗಿಲ್ ಮನಬಿಚ್ಚಿ ಮಾತನಾಡಿದ್ದಾರೆ. ಅಂದು ನಾನು ಮಯಾಂಕ್ ಬದಲು ಸ್ಟ್ರೈಕ್ ತೆಗೆದು ಕೊಳ್ಳಬೇಕಿತ್ತು, ಆದರೇ ನನ್ನ ಕರಿಯರ್ ಪರಿಗಣಿಸಿ ಅವರು ತಾವೇ ತೆಗೆದುಕೊಂಡರು. ಆದರೇ ಇಂದು ನಾನು ಅವರ ಸ್ಥಾನವನ್ನೇ ಕಬಳಿಸಿದ್ದೆನೆ. ಮಯಾಂಕ್ ರ ಆ ನಡೆಯನ್ನ ನನ್ನ ಕ್ರಿಕೇಟ್ ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.

ನೋಡಿ ಒಂದೇ ಒಂದು ಇನ್ನಿಂಗ್ಸ್ ಒಬ್ಬ ಕ್ರಿಕೇಟಿಗನ ಜೀವನದಲ್ಲಿ ಎಂತಹ ಪರಿಣಾಮವನ್ನು ಉಂಟು ಮಾಡುತ್ತದೆ ಎಂದು. ಮಯಾಂಕ್ ಸ್ಟ್ರೈಕ್ ತೆಗೆದುಕೊಳ್ಳದೇ ನಾನ್ ಸ್ಟ್ರೈಕ್ ನಲ್ಲಿ ಆಡಿದ್ದರೇ, ಬಹುಷಃ ಗಿಲ್ ಸಹ ಅಂದು ಬೇಗ ಔಟಾಗುತ್ತಿದ್ದರೇನೋ. ಆದರೂ ಮಯಾಂಕ್ ಯುವ ಕ್ರಿಕೇಟಿಗರಿಗಾಗಿ ಮಾಡಿದ ತ್ಯಾಗ ನಿಜಕ್ಕೂ ಅವರಲ್ಲಿನ ಕ್ರೀಡಾ ಸ್ಪೂರ್ತಿ ತೋರುತ್ತದೆ. ಕನ್ನಡಿಗ ಮಯಾಂಕ್ ಅಗರವಾಲ್ ರವರ ಈ ತ್ಯಾಗದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.