ವಿಜಯ್ ದೇವರಕೊಂಡ ಜೊತೆ ಸೇರಿಕೊಂಡು ಸೈಲೆಂಟಾಗಿ ಮತ್ತೊಂದು ಸಾಧನೆ ಮಾಡಿದ ರಶ್ಮಿಕ ಮಂದಣ್ಣ, ಮಾಡಿದ ಸಾಧನೆ ನೋಡಿ ಹೇಗಿದೆ !!

ನಮಸ್ಕಾರ ಸ್ನೇಹಿತರೆ, ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಭರ್ಜರಿ ಎಂಟ್ರಿ ಕೊಟ್ಟಂತಹ ನಟಿ ರಶ್ಮಿಕಾ ಮಂದಣ್ಣ ಇದೀಗ ಕನ್ನಡ ಮಾತ್ರವಲ್ಲದೆ ಹಲವಾರು ಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಟಾಲಿವುಡ್ನಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರದ್ದು ಸೂಪರ್ ಜೋಡಿ ಎಂದು ಸಾಬೀತಾಗಿದೆ.

ಗೀತಾ ಗೋವಿಂದಂ ಹಾಗೂ ಡಿಯರ್ ಕಾಮ್ರೇಡ್ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಈ ಜೋಡಿಗಳಿಗೆ ತನ್ನದೇ ಆದಂತಹ ಪ್ಯಾನ್ ಬೇಸ್ ಇದೆ ಎಂದರೆ ತಪ್ಪಾಗಲಾರದು. ಹೌದು ಈ ಜೋಡಿಗಳ ಆಕ್ಟಿಂಗ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ ಅಲ್ಲದೆ ರಿಯಲ್ ಲೈಫ್ನಲ್ಲಿ ಯು ಅವರು ಜೋಡಿ ಆಗಲಿ ಎಂದು ಆಸೆಪಟ್ಟ ಅಭಿಮಾನಿಗಳು ಹಲವರಿದ್ದಾರೆ.

ಇದೀಗ ಕನ್ನಡ, ತೆಲುಗು ಸಿನಿಮಾದ ನಂತರ ರಶ್ಮಿಕ ಮಂದಣ್ಣ ಅಮಿತಾ ಬಚ್ಚನ್ ಅವರೊಂದಿಗೆ ಹಿಂದಿ ಸಿನಿಮಾದಲ್ಲಿ ಅಭಿನಯಿಸುತ್ತಿರುವ ವಿಚಾರ ನಿಮ್ಮೆಲ್ಲರಿಗೂ ತಿಳಿದಿದೆ. ಹಾಗೆಯೇ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಹಿಂದಿಯಲ್ಲಿ ಒಂದು ಮೈಲುಗಲ್ಲನ್ನು ಮುಟ್ಟಿದ್ದಾರೆ ಎಂದರೆ ತಪ್ಪಾಗಲಾರದು.

ಹೌದು ರಶ್ಮಿಕ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಟಿಸಿದ್ದ ಡಿಯರ್ ಕಾಮ್ರೇಡ್ ಸಿನಿಮಾ ಹಿಂದಿ ವರ್ಷನ್ ಯೂಟ್ಯೂಬ್ನಲ್ಲಿ 250 ಮಿಲಿಯನ್ ವೀಕ್ಷಣೆ ಪಡೆದುಕೊಂಡು ಮುನ್ನುಗ್ಗುತ್ತಿದೆ. ಹೌದು ಜುಲೈ 26, 2019ರಂದು ಬಿಡುಗಡೆಯಾದ ಡಿಯರ್ ಕಾಮ್ರೇಡ್ ಚಿತ್ರ ಅದ್ಭುತ ಪ್ರದರ್ಶನ ಕಂಡಿತು. ತೆಲುಗಿನಲ್ಲಿ ತಯಾರಾದ ಈ ಸಿನಿಮಾ ಕನ್ನಡ, ಮಲಯಾಳಂ ಮತ್ತು ತಮಿಳಿನಲ್ಲಿ ರಿಲೀಸ್ ಆಗಿತ್ತು ಆದರೆ ಚಿತ್ರಮಂದಿರಗಳಲ್ಲಿ ಹೇಳುವಷ್ಟು ಯಶಸ್ಸನ್ನು ಚಿತ್ರ ಪಡೆದುಕೊಳ್ಳಲಿಲ್ಲ.

2020ರ ಜನವರಿ 19ರಂದು ಈ ಚಿತ್ರದ ಹಿಂದಿ ವರ್ಷನ್ ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಲಾಯಿತು. ಈವರೆಗೂ ಬರೋಬ್ಬರಿ 250 ಮಿಲಿಯನ್ ವಿಯೂಸ್ ಪಡೆದುಕೊಂಡು ರಶ್ಮಿಕ ಮಂದಣ್ಣ ಅವರ ಸಂತಸಕ್ಕೆ ಕಾರಣವಾಗಿದೆ. ಇದೀಗ ನೇರವಾಗಿ ಬಾಲಿವುಡ್ಗೆ ಕಾಲಿಟ್ಟಿರುವ ರಶ್ಮಿಕ ಮಂದಣ್ಣ ಮಿಷನ್ ಮಾಜ್ನು ಸಿನಿಮಾದಲ್ಲಿಯೇ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅದರ ಜೊತೆಗೆ ಅಮಿತಾ ಬಚ್ಚನ್ ಅವರ ಮಗಳಾಗಿ ಗುಡ್ಬೈ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಈ ಮೂಲಕ ರಶ್ಮಿಕಾ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೂಡಿದ್ದರೆ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.